2೦೦೦ ಮುಖಬೆಲೆಯ ಕೋಟಾ ನೋಟು ಪತ್ತೆ

Leave a Comment


ಇಂದು ಬೆಳಗಿನ ಜಾವ ಪಚಿಕ್ಕಮಗಳೂರಿನ ಎಪಿಎಂಸಿ ಮಾರ್ಕೇಟ್ ನಲ್ಲಿ ಪತ್ತೆಯಾಗಿದೆ. ಅಶೋಕ್ ಎಂಬುವರಿಗೆ ಈರುಳ್ಳಿ ಖರೀದಿಸಿ ಕೋಟಾ ನೋಟು ನೀಡಿದ್ದಾರೆ. ನೋಟಿನ ಬಾರ್ಡರ್ ಹಾಗೂ ಮಧ್ಯಭಾಗ ಅನುಮಾನದಂತಿದೆ. ನೋಟನ್ನ ಕತ್ತರಿಯಿಂದ ಕತ್ತರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕೋಟಾ ನೋಟು ನೋಡಿ ಜನ ಗಾಬರಿಯಾಗಿದ್ದಾರೆ.

Read More

ಕೇವಲ ಏಳು ದಿನದಲ್ಲಿ 62 ಲಕ್ಷ ಜನ ನೋಡಿ ತಯಾರಿಕೊಂಡ Air Cooler...!

Leave a Comment
ಕೇವಲ ಏಳು ದಿನದಲ್ಲಿ 62 ಲಕ್ಷ ಜನ ನೋಡಿ ತಯಾರಿಕೊಂಡ Air Cooler...!


ಕೇವಲ ಎರಡು ಖಾಲಿ ಬಾಟಲ್'ನಿಂದ ಸುಲಭವಾಗಿ ತಯಾರಿಸಬಹುದು. ಅದು ಹೇಗೆ ಎಂದು ವಿಡಿಯೋ ನೋಡಿ...


Read More

ಸೀತಾ ಫಲ ಹಣ್ಣಿನ ಉಪಯೋಗಗಳು ತಿಳಿದರೆ ಈಗಲೇ ತಿನ್ನಲು ಶುರು ಮಾಡುತ್ತೀರ!

Leave a Comment


ಸೀತಾಫಲ, ಈ ಸೀಜನ್'ನಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಒಂದು. ಇದರಲ್ಲಿ ವಿಟಮಿನ್ A, ಮೆಗ್ನಿಷಿಯಂ, ಪೊಟಾಷಿಯಂ, ಫೈಬರ್, ವಿಟಮಿನ್ ಬಿ6, ಕಾಲ್ಸಿಯಂ, ವಿಟಮಿನ್ ಸಿ, ಐರನ್ ನಂತಹ ಅನೇಕ ಪೋಷಕಾಂಶಗಳಿವೆ. ಇದನ್ನು ನಿತ್ಯ ಆಹಾರದ ಒಂದು ಭಾಗವಾಗಿ ಮಾಡಿಕೊಳ್ಳುವುದ್ದರಿಂದ ಎಷ್ಟೋ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಹಣ್ಣು ಮಾತ್ರವಲ್ಲದೆ ಇದರ ಎಲೆಗಳು, ಬೇರು, ಕಾಂಡದಿಂದಲ್ಲೂ ಅನೇಕ ಉಪಯೋಗಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೊಣ ಬನ್ನಿ....

ಸೀತಾ ಫಲದ ಎಲೆಗಳಿಂದ ತೆಗೆದ ರಸವನ್ನು ನಿತ್ಯ ಬೆಳಿಗ್ಗೆ ಒಂದು ಟೀ ಸ್ಪೂನ್ ಅಳತೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ತೂಕವನ್ನು ಸಹ ಕಡಿಮೆ ಮಾಡುತ್ತದೆ.


ಸೀತಾ ಫಲ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ದಂತೆ ಕಾಯಿಸಿಕೊಂಡ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.

ಸೀತಾ ಫಲವನ್ನು ಬೆಳಿಗ್ಗೆ ಉಪಹಾರವಾಗಿ ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ. ಶರೀರಕ್ಕೆ ಬೇಕಾದ ಶಕ್ತಿ ದೊರೆಯುತ್ತದೆ .

ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೃಷ್ಟಿ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಸೀತಾ ಫಲ ಹಣ್ಣಿನಲ್ಲಿರುವ ಮೆಗ್ನಿಷಿಯಂ ಹೃದಯ ಸಂಬಂಧಿ ಕಾಯಿಗಳು ಬರದಂತೆ ತಡೆಯುತ್ತದೆ. ಇವುಗಳಲ್ಲಿ ಇರುವ ಪೋಷಕಾಂಶಗಳು ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.

ಸೀತಾ ಫಲ ಹಣ್ಣನ್ನು ಪ್ರತಿದಿನ ತಿನ್ನುವುದರಿಂದ ಅಲ್ಸರ್ ವಾಸಿಯಾಗುತ್ತದೆ. ಗ್ಯಾಸ್, ಅಸಿಡಿಟಿ, ಅಜೀರ್ಣ, ಬಲಬದ್ದತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಗಲಾಡಿಸುತ್ತದೆ.

ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಿರುವವರು ಸೀತಫಲ ಹಣನ್ನು ತಿನ್ನುವುದು ಒಳ್ಳೆಯದು. ಇದರಿಂದ ರಕ್ತ ಉತ್ಪತ್ತಿಯಾಗುತ್ತದೆ.


ಶರೀರದಲ್ಲಿ ಉಷ್ಣಾಂಶ ಹೆಚ್ಚು ಇರುವವರು ಸೀತಾ ಫಲ ತಿನ್ನುವುದು ಒಳ್ಳೆಯದು. ಇದರಿಂದ ದೇಹದಲ್ಲಿನ ಉಷ್ಣತೆ ನಿಯಂತ್ರಣಕ್ಜೆ ಬರುತ್ತದೆ.

ಚಿಕ್ಕ ಮಕ್ಕಳು, ಬಾಣಂತಿ ತಾಯಿಯರಿಗೆ ಸೀತಾ ಫಲ ಒಳ್ಳೆಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅವರಿಗೆ ಶಕ್ತಿಯನ್ನು ಕೊಡುತ್ತದೆ.


ಬೆಳೆಯುವ ಮಕ್ಕಳಿಗೆ ನಿತ್ಯ ಸೀತಾ ಫಲ ಹಣ್ಣನ್ನು ತಿನ್ನುವುದರಿಂದ ಕ್ಯಾಲಿಯಂನಂತಹ ಪೋಷಕಾಂಶಗಳು ಹೆಚ್ಚಾಗಿ ಲಬಿಸುತ್ತವೆ. ಇದರಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ.

ಶರೀರದಲ್ಲಿನ ವ್ಯರ್ಥ ಪದಾರ್ಥಗಳನ್ನು ಹೊರ ಹಾಕುವಲ್ಲಿ ಸೀತಾ ಫಲ ಸಹಾಯ ಮಾಡುತ್ತದೆ. ಇದು ರಕ್ತ ಶುದ್ಧ ಕೂಡ ಮಾಡುತ್ತದೆ.


ಸೀತಾ ಫಲ ಎಲೆಗಳನ್ನು ನುಣ್ಣಗೆ ಅರಿದು ಹಚ್ಚುವುದರಿಂದ ಗಾಯ ಮುಂತಾದ ಚರ್ಮ ರೋಗಗಳನ್ನು ವಾಸಿಮಾಡುತ್ತದೆ.

ಸೀತಾ ಫಲ ಹಣ್ಣನ್ನು ಗರ್ಭಿಣಿ ಸ್ತ್ರೀಯರು ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ಅದರ ಬೀಜಗಳು ಹೊಟ್ಟೆ ಒಳಗೆ ಹೋದರೆ ಗರ್ಭಪಾತವಾಗಬಹುದು. ಅತಿಯಾದರೆ ಅಮೃತನೂ ವಿಷವಾಗುತ್ತದೆ ಎಂದು ಹಿರಿಯರು ಹೇಳುವಂತೆ ಸೀತಾ ಫಲವನ್ನು ಮಿತವಾಗಿ ಸೇವಿಸಿದರೆ ಒಳ್ಳೆಯದು.


Read More

ಅಪಘಾತವಾದ ತಕ್ಷಣ ಸಾವನ್ನಪ್ಪಿದ ಮಹಿಳೆಯ ದೇಹದಿಂದ ಹೊರಹೋದ ಆತ್ಮ! ನಂಬಿಕೆ ಇಲ್ಲವಾ? ವಿಡಿಯೋ ನೋಡಿ...

Leave a Comment


ಎರಡು ದಿನದ ಕೆಳಗೆ ಕಾರು ಬೈಕ್'ಗೆ ಡಿಕ್ಕಿ ಹೊಡೆದು ಬೈಕ್ ಸವಾರಿ ಮಾಡುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದಳು. ಆಗ ಆಕೆಯ ದೇಹದಿಂದ ಆತ್ಮ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರಿಕಾರ್ಡ್ ಆಗಿದ್ದು ಅದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಅಪಘಾತವಾದ ತಕ್ಷಣ ಸಾವನ್ನಪ್ಪಿದ ಮಹಿಳೆಯ ದೇಹದಿಂದ ಆತ್ಮ ಹೊರ ಹೋಗುತ್ತಿರುವಂತೆ ಇರುವ ವಿಡಿಯೋ ಚರ್ಚೆಯನ್ನು ಹುಟ್ಟು ಹಾಕಿದೆ. ಇದು ಮೊನ್ನೆ ಥಾಯ್ಲೆಂಡ್'ನಲ್ಲಿ ನಡೆದ ನೈಜ ಘಟನೆ ಎಂದು ಹೇಳಲಾಗುತ್ತಿದೆ. ಒಮ್ಮೆ ವೀಡಿಯೋ  ನೋಡಿ...


Read More

ಆಕಸ್ಮಿಕವಾಗಿ ಗಡಿ ದಾಟಿಬಂದ ಬಾಲಕ ಮುಂದೆ ಏನಾಯಿತು? ತಪ್ಪದೇ ಓದಿ...

Leave a Comment


ಈ ಜಗತ್ತಿನಲ್ಲಿ ಶತ್ರುವಿಗೂ ಕೂಡ ಒಳ್ಳೆಯದು ಬಯಸುವಂತಹ ದೇಶ ಇದೆ ಎಂದರೆ ಅದು ಭಾರತ ಮಾತ್ರ.

ಭರತ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರೀತಿ, ಪ್ರೇಮ, ಕರುಣೆ ಹುಟ್ಟಿನಿಂದಲೇ ಬಂದಿರುತ್ತವೆ. ಆದರಿಂದಲ್ಲೇ ಪಾಕಿಸ್ತಾನ ಎಂಬ ದೇಶ ಇನ್ನೂ ಪ್ರಪಂಚದ ಭೂಪಟದಲ್ಲಿ ಉಳಿದುಕೊಂಡಿರುವುದು.

ಉರಿ ದಾಳಿಯಲ್ಲಿ ನಮ್ಮ 19 ಜನ ಸೈನಿಕರು ಸಾವನ್ನಪ್ಪಿದ ನಂತರ ಅದಕ್ಕೆ ಪ್ರತಿಕಾರವಾಗಿ ಭಾರತದ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕ್ ನೆಲಕ್ಕೆ ನುಗ್ಗಿ ಭಯೋತ್ಪಾದಕರನ್ನು ನರಕಕ್ಕೆ ಪಾರ್ಸಲ್ ಮಾಡಿ ಬಂದರು ಇದರಿಂದ ಭಾರತ-ಪಾಕ್ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಗಡಿಯಲ್ಲಿ ಯಾವಾಗ ಏನಾಗುವುದೋ ಎಂಬ ಆತಂಕ ಮನೆ ಮಾಡಿದೆ.

ಇದೇ ಸಮಯದಲ್ಲಿ ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಗಡಿದಾಟಿ ಭಾರತದ ಭೂಭಾಗ ಪ್ರವೇಶಿಸಿದ 12 ವರ್ಷದ ಬಾಲಕ ಮೊಹಮ್ಮದ್ ತನ್ವಿರ್'ನನ್ನು ವಿಚಾರಣೆಗೆ ಒಳಪಡಿಸಿದಾಗ ಬಾಲಕ ನೀರು ಕುಡಿಯಲು ಬಂದಿರುವುದಾಗಿ ಹೇಳಿದ್ದಾನೆ. ಆಗ ನಮ್ಮ ಸೈನಿಕರು ಹೊಟ್ಟೆ ತುಂಬಾ ಊಟ ಕೊಟ್ಟು, ರಾತ್ರಿ ಜೊತೆಯಲ್ಲಿ ಮುಗಿಸಿಕೊಂಡು ಬೆಳಿಗ್ಗೆ ಪಾಕಿಸ್ತಾನದ ಅಧಿಕಾರಿಗಳ ಜೊತೆ ಮಾತನಾಡಿ ಆ ಬಾಲಕನನ್ನು ಸುರಕ್ಷಿತವಾಗಿ ವಾಪಸ್ಸು ಕಳಿಸಿದ್ದಾರೆ ನಮ್ಮ ಸೈನಿಕರು.

ಆದರೆ ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿದ ನಮ್ಮ ಸೈನಿಕ ಚಂದು ಬಾಬುಲಾಲ್ ಚವಾನ್'ನನ್ನು ಪಾಕಿಸ್ತಾನದ ಸೈನ್ಯ ಬಂಧಿಸಿದ್ದು, ಇದುವರೆಗೆ ಆತನ ಬಗ್ಗೆ ಮಾಹಿತಿಯಿಲ್ಲ. ಅದಕ್ಕೆ ಮೊದಲೇ ಹೇಳಿದ್ದು ಈ ಜಗತ್ತಿನಲ್ಲಿ ಶತ್ರುವಿಗೂ ಕೂಡ ಒಳ್ಳೆಯದು ಬಯಸುವಂತಹ ದೇಶ ಇದೆಯೆಂದರೆ ಅದು ಭಾರತ ಮಾತ್ರ ಎಂದು.Read More

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಪ್ರಿಜ್ ನಲ್ಲಿ ಇಡಬೇಡಿ

Leave a Comment

ಪ್ರಿಜ್ ಇದೆಯೆಂದು ಸಿಕ್ಕಿದ್ದನ್ನೇಲ್ಲ ಅದರಲ್ಲಿ ಇಡಬೇಡಿ. ತರಕಾರಿ, ಹಣ್ಣುಗಳು, ಜ್ಯೂಸ್, ಕೊನೆಗೆ ಮಾಡಿದ ಆಡುಗೆ ಪದಾರ್ಥಗಳನ್ನು ಸಹ ಪ್ರಿಜ್'ನಲ್ಲಿಡುತ್ತಾರೆ. ಆಳಾದಂತೆ ಇಡಲು ಇದು ಒಳ್ಳೆಯದೇ ಆದರೂ, ಕೆಲವನ್ನು ಪ್ರಿಜ್'ನಲ್ಲಿ ಇಡದೇ ಇರುವುದೇ ಒಳ್ಳೆಯದು. ಅವು ಹೀಗಿವೆ.

ಈರುಳ್ಳಿ ಹಾಗೂ ಕತ್ತರಿಸಿದ ಈರುಳ್ಳಿಯನ್ನು ಪ್ರಿಜ್'ನಲ್ಲಿಡಬಾರದು. ಅದರ ವಾಸನೆ ಪ್ರಿಜ್ ಜೊತೆಗೆ ಅದರಲ್ಲಿ ಇಟ್ಟ ಆಹಾರವನ್ನು ಸೇರಿ, ಆಹಾರವೂ ವಾಸನೆ ಬರುವಂತೆ ಮಾಡುತ್ತದೆ.

ಟಮಾಟೋಗೆ ಗಾಳಿಯಾಡಬೇಕು. ತಂಪಾದ ಟಮಾಟೋ ರುಚಿಯನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಟಮಾಟೋ ಅನ್ನು ಪ್ರಿಜ್'ನಲ್ಲಿ ಇಡಬಾರದು.

ತುಪ್ಪವನ್ನು ಪ್ರಿಜ್'ನಲ್ಲಿ ಇಡಬೇಕಾದ ಅವಶ್ಯಕತೆಯಿಲ್ಲ‌. ಯಾವುದೇ ಕಾಲಮಾನವಾದರೂ ಅದನ್ನು ಹೊರಯಿಟ್ಟರೆ ಕೆಡುವುದಿಲ್ಲ.

ಬ್ರೆಡ್ ಅನ್ನು ಸಹ ಪ್ರಿಜ್'ನಲ್ಲಿಡುವುದು ಸರಿಯಲ್ಲ. ತಂಪಾದ ಪ್ರದೇಶದಲ್ಲಿ ಇಟ್ಟರೆ ಸಾಕು. ಅದಕ್ಕೆ ಪ್ರಿಜ್'ನ ಅವಶ್ಯಕತೆ ಇಲ್ಲ.

ಬೆಳ್ಳುಳ್ಳಿ ಹೆಚ್ಚು ಕಾಲ ಬರಬೇಕೆಂದರೆ ಅದನ್ನು ಗಾಳಿಯಾಡುವ ಜಾಗದಲ್ಲಿ ಇಡಿ. ಅದನ್ನು  ಪ್ರಿಜ್'ನಲ್ಲಿ ಇಡುವ ಅವಶ್ಯಕತೆಯಿಲ್ಲ.
Read More

ಅಂದು 472 ಅನಾಥ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ, ಇಂದು ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ

Leave a Comment

ಕಾಶ್ಮೀರದ ಉರಿ ಉಗ್ರರ ದಾಳಿಯಲ್ಲಿ ಭಾರತದ 18  ಸೈನಿಕರು ಸಾವನ್ನಪ್ಪಿದರು. ಆ ವೀರ ಯೋಧರ ಮಕ್ಕಳಿಗೆ ತಾನು ಶಿಕ್ಷಣ ಕೊಡಿಸುತ್ತೇನೆ ಎಂದು ಗುಜರಾತಿನ ಉದ್ಯಮಿ ಮುಂದೆ ಬಂದಿದ್ದಾರೆ. ಅವರೇ ಸೂರತ್'ನ ಮಹೇಶ್ ಸವಾನಿ.

ಇವರು ಇದಕ್ಕೂ ಮುಂಚೆ ತಂದೆತಾಯಿ ಇಲ್ಲದ 472 ಹೆಣ್ಣು ಮಕ್ಕಳಿಗೆ ತಾವೇ ಮುಂದೆ ನಿಂತು ಎಲ್ಲಾ ಖರ್ಚುವೆಚ್ಚಗಳನ್ನು ಭರಿಸಿ ಮದುವೆ ಮಾಡಿಕೊಟ್ಟಿದ್ದಾರೆ. ಈಗ ಉರಿ ದಾಳಿಯಲ್ಲಿ ವೀರ ಮರಣ ಹೊಂದಿದ ಸೈನಿಕರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದಾರೆ.

ದಾಳಿಯಲ್ಲಿ ಸಾವನ್ನಪ್ಪಿದ ಯೋಧನ ಮಗ ಶವದ ಮುಂದೆ ಅಳುತ್ತಾ 'ಅಪ್ಪ ನೀನು ನನ್ನ ಚೆನ್ನಾಗಿ ಓದಿಕೋ ಎಂದು ಹೇಳುತ್ತಿದ್ದೆ ಈಗ ನನ್ನ ಬಿಟ್ಟು ಹೋದೆಯಾ ಎಂದು ದುಃಖಿಸಿ ಅಳುವುದನ್ನು ನೋಡಿದ ಉದ್ಯಮಿ ಮಹೇಶ್'ರವರ ಹೃದಯ ಕರಗಿತು ತಕ್ಷಣ ದಾಳಿಯಲ್ಲಿ ಸಾವನ್ನಪ್ಪಿದ ಎಲ್ಲಾ ಯೋದರ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದರು. ಶಿಕ್ಷಣದ ಜೊತೆಗೆ ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
Read More